ಉಡುಪಿ ಜಿಲ್ಲಾ ಆರೋಗ್ಯ ಇಲಾಖೆ 2025-26ನೇ ಸಾಲಿಗೆ ವೈದ್ಯರು, ನರ್ಸ್‌ಗಳು, ತಾಂತ್ರಿಕ ಸಿಬ್ಬಂದಿ ಸೇರಿದಂತೆ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಹೃದಯರೋಗ ತಜ್ಞ, ಫಿಸಿಶಿಯನ್, ನೇತ್ರ ತಜ್ಞ, ಶುಕ್ರೂಷಕಿ ಹಾಗೂ ಮಲ್ಟಿ ರಿಹ್ಯಾಬಿಲಿಟೇಶನ್ ವರ್ಕರ್ ಹುದ್ದೆಗಳು ಖಾಲಿ ಇವೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16 ಅಕ್ಟೋಬರ್ 2025.
ಉಡುಪಿ ಜಿಲ್ಲಾ ಆರೋಗ್ಯ ಇಲಾಖೆ ನೇಮಕಾತಿ 2025
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಛೇರಿಯಿಂದ ಬಂದ ಈ ನೋಟಿಸ್ ಪ್ರಕಾರ, ರಾಷ್ಟ್ರೀಯ ಆರೋಗ್ಯ ಅಭಿಯಾನ (National Health Mission) ಮತ್ತು ‘ನಮ್ಮ ಕ್ಲಿನಿಕ್’ ಯೋಜನೆಯಡಿ ಜಿಲ್ಲೆಯಾದ್ಯಂತ ಹಲವಾರು ಹುದ್ದೆಗಳು ಖಾಲಿ ಇವೆ. ಇವುಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗುವುದು.
ಹೇಗಿದೆ ಈ ನೇಮಕಾತಿ ಪ್ರಕ್ರಿಯೆ? ಏನು ಯಾವ ಹುದ್ದೆಗಳಿವೆ? ಅರ್ಜಿ ಸಲ್ಲಿಸುವುದಕ್ಕೆ ಅಥವಾ ಅರ್ಜಿಯ ಕುರಿತು ಇನ್ನಷ್ಟು ವಿವರಗಳ ಬೇಕಾದ್ರೆ ಈ ಲೇಖನ ಓದಿರಿ.
ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಮುನ್ನ ಈ ಮಾಹಿತಿಯನ್ನು ಚೆನ್ನಾಗಿ ಓದಿ.
- ವಿದ್ಯಾರ್ಹತೆ, ವಯಸ್ಸು, ವೇತನ: ಯಾವ ಯಾವ ಹುದ್ದೆಗೆ ಯಾವ ವಿದ್ಯಾರ್ಹತೆ ಬೇಕು, ಎಷ್ಟು ವಯಸ್ಸಿನವರು ಅರ್ಜಿ ಹಾಕಬಹುದು, ಎಷ್ಟು ಸಂಬಳ ಸಿಗುತ್ತದೆ ಎಂಬೆಲ್ಲಾ ಮಾಹಿತಿಯನ್ನು ಚೆನ್ನಾಗಿ ಓದಿ.
- ಅಧಿಸೂಚನೆ ಓದಿ: ಕೆಳಗಡೆ ಕೊಟ್ಟಿರುವ ಲಿಂಕ್‌ನಲ್ಲಿ ಅಧಿಸೂಚನೆ ಸಂಪೂರ್ಣವಾಗಿ ಓದಿ. ಇದರಲ್ಲಿ ಎಲ್ಲಾ ಮಾಹಿತಿ ವಿವರವಾಗಿ ಇರುತ್ತದೆ.
- ಕೊನೆಯ ದಿನಾಂಕ ಗಮನಿಸಿ: ಅರ್ಜಿ ಹಾಕಲು ಕೊನೆಯ ದಿನಾಂಕವನ್ನು ಮಿಸ್ ಮಾಡಿಕೊಳ್ಳಬೇಡಿ.
- ಇತರ ಗ್ರೂಪ್‌ಗಳಿಗೆ ಜಾಯಿನ್ ಆಗಿ: ನಮ್ಮ ಟೆಲಿಗ್ರಾಮ್ ಮತ್ತು ಫೇಸ್‌ಬುಕ್ ಗ್ರೂಪ್‌ಗಳಿಗೆ ಜಾಯಿನ್ ಆಗಿ. ಪ್ರತಿದಿನ ಹೊಸ ಉದ್ಯೋಗ ಮಾಹಿತಿ ಸಿಗುತ್ತದೆ.
- ಉಚಿತ ಸೇವೆ: ನಾವು ಒದಗಿಸುವ ಎಲ್ಲಾ ಮಾಹಿತಿ ಉಚಿತವಾಗಿರುತ್ತೆ. ನಮ್ಮ ಹೆಸರಿನಲ್ಲಿ ಯಾರಾದರೂ ಹಣ ಕೇಳಿದರೆ ತಕ್ಷಣ ನಮಗೆ ಮಾಹಿತಿ ನೀಡಿ.
- ಹೆಚ್ಚಿನ ಉದ್ಯೋಗ ವಿವರಗಳಿಗಾಗಿ, ನಮ್ಮ Ka20jobs.com ವೆಬ್‌ಸೈಟ್‌ಗೆ ಭೇಟಿ ನೀಡಿ.
- ನಮ್ಮ WhatsApp Groupಗೆ ಸೇರುವ ಮೂಲಕ ಪ್ರತಿದಿನ ತ್ವರಿತ ಉಚಿತ ಉದ್ಯೋಗ ಅಪ್ಡೇಟ್ಗಳನ್ನು ಪಡೆಯಿರಿ.
- ನಮ್ಮ ಅಧಿಕೃತ WhatsApp Channelಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ.
DHFWS Udupi Recruitment 2025: ಉದ್ಯೋಗದ ಮೇಲ್ನೋಟ
| ನೇಮಕಾತಿ ಸಂಸ್ಥೆ | ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಛೇರಿ ಉಡುಪಿ |
|---|---|
| ಹುದ್ಧೆಯ ಹೆಸರು | ವಿವಿಧ ಹುದ್ಧೆಗಳು |
| ಒಟ್ಟು ಹುದ್ದೆ | 23 |
| ನೇಮಕಾತಿ ಪ್ರಕಾರ | ಗುತ್ತಿಗೆ (Contract Basis) |
| ಉದ್ಯೋಗ ಸ್ಥಳ | ಉಡುಪಿ – ಕರ್ನಾಟಕ |
| ಅಧಿಕೃತ ವೆಬ್‌ಸೈಟ್ | udupi.nic.in |
| ಅರ್ಜಿ ಸಲ್ಲಿಸುವ ಬಗೆ | ಆಫ್ಲೈನ್ |
| ವಾಟ್ಸಾಪ್ ಗ್ರೂಪ್ ಸೇರುವ ಲಿಂಕ್ಗೆ ಇಲ್ಲಿ ಕ್ಲಿಕ್ ಮಾಡಿ | ಇಲ್ಲಿ ಕ್ಲಿಕ್ ಮಾಡಿ |
ಹೆಚ್ಚಿನ ಉದ್ಯೋಗಗಳು: IPPB ನೇಮಕಾತಿ 2025: ಅಂಚೆ ಇಲಾಖೆಯ ಗ್ರಾಮೀಣ ಡಾಕ್ ಸೇವಕರಿಗೆ 348 ಎಕ್ಸಿಕ್ಯುಟಿವ್ ಹುದ್ದೆಗಳು
ಹುದ್ದೆಯ ವಿವರಗಳು
| ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
|---|---|
| ಹೃದಯ ರೋಗ ತಜ್ಞ (Cardiologist) | 01 |
| ಎನ್.ಸಿ.ಡಿ ಫಿಸಿಶಿಯನ್ (NCD Physician) | 01 |
| ಕನ್ಸಲ್ಟಂಟ್ ಮೆಡಿಸಿನ್ (Consultant Medicine) | 01 |
| ಎನ್.ಪಿ.ಪಿ.ಸಿ ಫಿಸಿಶಿಯನ್ | 01 |
| ನೇತ್ರ ತಜ್ಞ (Ophthalmologist) | 01 |
| ವೈದ್ಯಾಧಿಕಾರಿ (Medical Officer – E-Hospital) | 01 |
| ಕ್ಷೇಮ ಕೇಂದ್ರ ಸಂಯೋಜಕ (Wellness Centre Coordinator) | 01 |
| ಮಲ್ಟಿ ರಿಹ್ಯಾಬಿಲಿಟೇಶನ್ ವರ್ಕರ್ (Multi Rehabilitation Worker – MRW) | 02 |
| Audiometric Assistant / Instructor for Hearing Impaired | 02 |
| ANM / PHCO | 01 |
| ನೇತ್ರ ಸಹಾಯಕರು | 01 |
| ಕಿರಿಯ ಆರೋಗ್ಯ ಸಹಾಯಕರು (Junior Health Assistant) | 02 |
| ಶುಶ್ರುಷಕರು | 08 |
| ಒಟ್ಟು ಹುದ್ದೆಗಳು | 23 |
ಶೈಕ್ಷಣಿಕ ಅರ್ಹತೆ
ಯಾವ ಪೋಸ್ಟ್‌ಗಳಿವೆ, ಮತ್ತು ಅದಕ್ಕೆ ಏನೆಲ್ಲಾ ಓದಿರಬೇಕು ಎಂದು ತಿಳಿಯೋಣ ಬನ್ನಿ.
ವೈದ್ಯಕೀಯ ತಜ್ಞರ ಹುದ್ದೆಗಳು (Medical Specialists)
ಈ ಹುದ್ದೆಗಳು ಹೆಚ್ಚಾಗಿ ಜಿಲ್ಲಾ ಆಸ್ಪತ್ರೆ, ಉಡುಪಿ ಇಲ್ಲಿವೆ.
- ಎನ್.ಸಿ.ಡಿ ಹೃದಯ ರೋಗ ತಜ್ಞರು/ ಫಿಸಿಶಿಯನ್/ ನೇತ್ರ ತಜ್ಞರು: ಈ ಎಲ್ಲ ಹುದ್ದೆಗಳಿಗೆ ಎಂ.ಬಿ.ಬಿ.ಎಸ್ ಜೊತೆಗೆ ಎಂ.ಡಿ. ಪದವಿ ಕಡ್ಡಾಯ. ಹೃದ್ರೋಗ ತಜ್ಞರ ಹುದ್ದೆಗೆ ಕಾರ್ಡಿಯಾಲಜಿಯಲ್ಲಿ ವಿಶೇಷ ತರಬೇತಿ ಇದ್ದರೆ ಆದ್ಯತೆ ಸಿಗುತ್ತೆ.
- ವೈದ್ಯಾಧಿಕಾರಿ (E-Hospital): ಎಂ.ಬಿ.ಬಿ.ಎಸ್ ಮಾಡಿದವರಿಗೆ ಈ ಹುದ್ದೆ.
ನರ್ಸಿಂಗ್ ಮತ್ತು ಅರೆ ವೈದ್ಯಕೀಯ ಸಿಬ್ಬಂದಿ (Nursing & Paramedical)
ಈ ವಿಭಾಗದಲ್ಲಿ ಸಾಕಷ್ಟು ಹುದ್ದೆಗಳಿದ್ದು, ವಿವಿಧ ಆರೋಗ್ಯ ಕೇಂದ್ರಗಳಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
- ಶುಶ್ರೂಷಕರು (ನರ್ಸ್):
- ಅರ್ಹತೆ: ಬಿ.ಎಸ್ಸಿ ನರ್ಸಿಂಗ್, ಜಿ.ಎನ್.ಎಂ ಅಥವಾ ಡಿಪ್ಲೋಮಾ ನರ್ಸಿಂಗ್ ಮುಗಿಸಿರಬೇಕು. ಜೊತೆಗೆ, ಕರ್ನಾಟಕ ನರ್ಸಿಂಗ್ ಕೌನ್ಸಿಲ್ (KNC) ನಲ್ಲಿ ನೋಂದಾವಣಿಯಾಗಿರುವುದು ಬಹಳ ಮುಖ್ಯ.
- ಕೆಲವು ಹುದ್ದೆಗಳಿಗೆ 3 ವರ್ಷಗಳ ಅನುಭವ ಕೇಳಿದ್ದಾರೆ.
- ಸ್ಥಳ ಮತ್ತು ಅನುಭವದ ಆಧಾರದ ಮೇಲೆ ವೇತನವು ₹14,187 ರಿಂದ ₹22,000 ವರೆಗೆ ಇದೆ.
- ಮಲ್ಟಿ ರಿಹ್ಯಾಬಿಲಿಟೇಶನ್ ವರ್ಕರ್ (MRW):
- 10+2 (ಪಿಯುಸಿ) ಜೊತೆಗೆ, ಮಾನ್ಯತೆ ಪಡೆದ ಸಂಸ್ಥೆಯಿಂದ MRW ಸರ್ಟಿಫಿಕೇಟ್ ಕೋರ್ಸ್ ಅಥವಾ DCBR/PGDCBR ಡಿಪ್ಲೋಮ ಇರಬೇಕು. RCI (ಭಾರತದ ಪುನರ್ವಸತಿ ಪರಿಷತ್) ನೋಂದಣಿ ಇದ್ದರೆ ಉತ್ತಮ.
- ಇತರೆ ಪ್ರಮುಖ ಹುದ್ದೆಗಳು:
- ಜಿಲ್ಲಾ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಸಂಯೋಜಕರು (Co-ordinator): BDS/BAMS/BHMS/B.Sc Nursing with MPH/MBA ಮುಂತಾದ ಹಲವಾರು ವಿದ್ಯಾರ್ಹತೆಗಳನ್ನು ಪರಿಗಣಿಸಲಾಗಿದೆ.
- ನೇತ್ರ ಸಹಾಯಕರು (Ophthalmic Assistant): ಎರಡು ವರ್ಷದ ಡಿಪ್ಲೋಮಾ ಇನ್ ಆಪ್ಟೋಮೆಟ್ರಿ ಅಥವಾ ನೇತ್ರ ಸಹಾಯಕರಿಗೆ ಸಂಬಂಧಿಸಿದ ತರಬೇತಿ.
- ಕಿರಿಯ ಆರೋಗ್ಯ ಸಹಾಯಕರು (Junior Health Assistants): ಎಸ್.ಎಸ್.ಎಲ್.ಸಿ (SSLC) ಜೊತೆಗೆ ಬಹು ಉದ್ದೇಶಿತ ಮೂಲ ಆರೋಗ್ಯ ಕಾರ್ಯಕರ್ತರ ತರಬೇತಿ ಅಥವಾ ಆರೋಗ್ಯ ನಿರೀಕ್ಷಕರ ಡಿಪ್ಲೋಮಾ (3 ವರ್ಷ/2 ವರ್ಷ) ಅಗತ್ಯ.
| ಹುದ್ದೆಯ ಹೆಸರು | ಅರ್ಹತೆ |
|---|---|
| ಹೃದಯ ರೋಗ ತಜ್ಞ (Cardiologist) | ಎಂ.ಬಿ.ಬಿ.ಎಸ್, ಎಂ.ಡಿ / DNB in Cardiology |
| ಎನ್.ಸಿ.ಡಿ ಫಿಸಿಶಿಯನ್ (NCD Physician) | ಎಂ.ಬಿ.ಬಿ.ಎಸ್, ಎಂ.ಡಿ |
| ಕನ್ಸಲ್ಟಂಟ್ ಮೆಡಿಸಿನ್ (Consultant Medicine) | ಎಂ.ಬಿ.ಬಿ.ಎಸ್, ಎಂ.ಡಿ |
| ಎನ್.ಪಿ.ಪಿ.ಸಿ ಫಿಸಿಶಿಯನ್ | ಎಂ.ಬಿ.ಬಿ.ಎಸ್, ಎಂ.ಡಿ |
| ನೇತ್ರ ತಜ್ಞ (Ophthalmologist) | ಎಂ.ಬಿ.ಬಿ.ಎಸ್, ಎಂ.ಡಿ |
| ವೈದ್ಯಾಧಿಕಾರಿ (Medical Officer – E-Hospital) | ಎಂ.ಬಿ.ಬಿ.ಎಸ್ |
| ಕ್ಷೇಮ ಕೇಂದ್ರ ಸಂಯೋಜಕ (Wellness Centre Coordinator) | BDS/BAMS/BHMS/BUMS/BYNS |
| ಮಲ್ಟಿ ರಿಹ್ಯಾಬಿಲಿಟೇಶನ್ ವರ್ಕರ್ (Multi Rehabilitation Worker – MRW) | 10+2 + 1 Year MRW / Multipurpose Rehabilitation Course |
| Audiometric Assistant / Instructor for Hearing Impaired | Diploma in Hearing, Language & Speech (DHLS) |
| ANM / PHCO | ANM Course + KNC Registration |
| ನೇತ್ರ ಸಹಾಯಕರು | ಎರಡು ವರ್ಷದ Diploma In Optometry |
| ಕಿರಿಯ ಆರೋಗ್ಯ ಸಹಾಯಕರು (Junior Health Assistant) | SSLC/PUC + JHA Training |
| ಶುಶ್ರುಷಕರು | B.Sc Nursing / GNM / Diploma Nursing |
ಇದೆಲ್ಲಾ ನೋಡಿದ್ರೆ, ಉಡುಪಿ ಜಿಲ್ಲಾ ಆರೋಗ್ಯ ಇಲಾಖೆಯು ಎಲ್ಲ ರೀತಿಯ ವೃತ್ತಿಪರರಿಗೆ ಅವಕಾಶ ನೀಡುತ್ತಿದೆ ಎಂಬುದು ಸ್ಪಷ್ಟವಾಗುತ್ತೆ.
ವೇತನ
| ಹುದ್ದೆಯ ಹೆಸರು | ವೇತನ (ಪ್ರತಿ ತಿಂಗಳು) |
|---|---|
| ಹೃದಯ ರೋಗ ತಜ್ಞ (Cardiologist) | ₹1,40,000 |
| ಎನ್.ಸಿ.ಡಿ ಫಿಸಿಶಿಯನ್ (NCD Physician) | ₹1,40,000 |
| ಕನ್ಸಲ್ಟಂಟ್ ಮೆಡಿಸಿನ್ (Consultant Medicine) | ₹1,40,000 |
| ಎನ್.ಪಿ.ಪಿ.ಸಿ ಫಿಸಿಶಿಯನ್ | ₹1,40,000 |
| ನೇತ್ರ ತಜ್ಞ (Ophthalmologist) | ₹1,40,000 |
| ವೈದ್ಯಾಧಿಕಾರಿ (Medical Officer – E-Hospital) | ₹75,000 |
| ಕ್ಷೇಮ ಕೇಂದ್ರ ಸಂಯೋಜಕ (Wellness Centre Coordinator) | ₹30,000 |
| ಮಲ್ಟಿ ರಿಹ್ಯಾಬಿಲಿಟೇಶನ್ ವರ್ಕರ್ (Multi Rehabilitation Worker – MRW) | ₹15,000 |
| Audiometric Assistant / Instructor for Hearing Impaired | ₹15,000 |
| ANM / PHCO | ₹14,044 |
| ನೇತ್ರ ಸಹಾಯಕರು | ₹15,114 |
| ಕಿರಿಯ ಆರೋಗ್ಯ ಸಹಾಯಕರು (Junior Health Assistant) | ₹14,000 |
| ಶುಶ್ರುಷಕರು | ₹14,187/- ರಿಂದ ₹22,000/- |
ಅರ್ಜಿ ಶುಲ್ಕ
- ಅರ್ಜಿ ಶುಲ್ಕವಿಲ್ಲ.
ಆಯ್ಕೆ ಪ್ರಕ್ರಿಯೆ
- ನೇಮಕಾತಿ ಪ್ರಕ್ರಿಯೆ NHM ಮಾರ್ಗಸೂಚಿ ಮತ್ತು ರೋಸ್ಟರ್ ಕಂ ಮೆರಿಟ್ ನಿಯಮಗಳಂತೆ ನಡೆಯುತ್ತದೆ.
ಪ್ರಮುಖ ದಿನಾಂಕಗಳು
| ಈವೆಂಟ್ | ದಿನಾಂಕ |
|---|---|
| ಅಪ್ಲಿಕೇಶನ್‌ಗಳ ಪ್ರಾರಂಭ ದಿನಾಂಕ | 09/10/2025 |
| ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ | 16/10/2025 |
ಪ್ರಮುಖ ಲಿಂಕ್‌ಗಳು
| ಅಧಿಕೃತ ವೆಬ್‌ಸೈಟ್ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ ಲಿಂಕ್ | ಇಲ್ಲಿ ಡೌನ್ಲೋಡ್ ಮಾಡಿ |
| ಅಧಿಸೂಚನೆ ಪುಟದ ಲಿಂಕ್ | ಇಲ್ಲಿ ವೀಕ್ಷಿಸಿ |
| ವಾಟ್ಸಾಪ್ ಗ್ರೂಪ್ ಸೇರುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಸಲ್ಲಿಸುವ ಪ್ರಕ್ರಿಯೆ
ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸರಳವಾಗಿದೆ. ಆದರೆ, ಸಮಯಕ್ಕೆ ಸರಿಯಾಗಿ ಸಲ್ಲಿಸುವುದು ಬಹಳ ಮುಖ್ಯ.
- ಅರ್ಜಿ ನಮೂನೆ ಪಡೆಯಿರಿ: ಮೊದಲು, ಅಧಿಕೃತ ವೆಬ್‌ಸೈಟ್ udupi.nic.in ಗೆ ಭೇಟಿ ನೀಡಿ. ಅಲ್ಲಿ ಲಭ್ಯವಿರುವ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಿ. (ಡೌನ್ಲೋಡ್ ಲಿಂಕ್ ಮೇಲೆ ನೀಡಲಾಗಿದೆ)
- ಭರ್ತಿ ಮಾಡಿ: ಅರ್ಜಿಯಲ್ಲಿ ಕೇಳಿರುವ ಎಲ್ಲ ಮಾಹಿತಿಗಳನ್ನು ಎಚ್ಚರಿಕೆಯಿಂದ ಮತ್ತು ಸರಿಯಾಗಿ ಭರ್ತಿ ಮಾಡಿ.
- ದಾಖಲೆಗಳನ್ನು ಲಗತ್ತಿಸಿ: ಅರ್ಜಿಯಲ್ಲಿ ತಿಳಿಸಿರುವ ಎಲ್ಲ ಅಗತ್ಯ ದಾಖಲೆಗಳನ್ನು (ಶೈಕ್ಷಣಿಕ ಪ್ರಮಾಣ ಪತ್ರಗಳು, ಜಾತಿ ಪ್ರಮಾಣ ಪತ್ರ ಇತ್ಯಾದಿ) ತಪ್ಪದೇ ಲಗತ್ತಿಸಿ.
- ಸಲ್ಲಿಸುವ ಸ್ಥಳ ಮತ್ತು ಕೊನೆಯ ದಿನಾಂಕ: ಭರ್ತಿ ಮಾಡಿದ ಅರ್ಜಿಯನ್ನು ದಿನಾಂಕ: 16/10/2025 ರ ಸಂಜೆ 4:00 ಗಂಟೆಯೊಳಗೆ ಕೆಳಗೆ ನೀಡಿರುವ ವಿಳಾಸಕ್ಕೆ ತಲುಪಿಸಬೇಕು. ಈ ಸಮಯದ ನಂತರ ಬಂದ ಅರ್ಜಿಗಳನ್ನು ಖಂಡಿತವಾಗಿಯೂ ಸ್ವೀಕರಿಸುವುದಿಲ್ಲ.
ಅರ್ಜಿ ಸಲ್ಲಿಸಬೇಕಾದ ವಿಳಾಸ: ಜಿಲ್ಲಾ ಯೋಜನಾ ನಿರ್ವಹಣಾ ಘಟಕ ಎನ್.ಹೆಚ್.ಎಮ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ, ಅಜ್ಜರಕಾಡು, ಉಡುಪಿ – 576101.
ಪ್ರಮುಖ ಸೂಚನೆ: ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಸಲ್ಲಿಸಬೇಕೆಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ಹೆಚ್ಚಿನ ಉದ್ಯೋಗಗಳು: KKRTC ನೇಮಕಾತಿ 2025: ಕಲ್ಯಾಣ ಕರ್ನಾಟಕದ 316 ನಿರ್ವಾಹಕ ಮತ್ತು ಸಹಾಯಕ ಲೆಕ್ಕಿಗ ಹುದ್ದೆಗಳಿಗೆ ಅರ್ಜಿ ಆಹ್ವಾನ
FAQS: ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳು
ನೇಮಕಾತಿ ಯಾವ ಆಧಾರದ ಮೇಲೆ ನಡೆಯುತ್ತಿದೆ?
- ಈ ನೇಮಕಾತಿಯು ಸಂಪೂರ್ಣವಾಗಿ ಗುತ್ತಿಗೆ ಆಧಾರದ ಮೇಲೆ (Contract Basis) ನಡೆಯುತ್ತಿದ್ದು, ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ಮಾರ್ಗಸೂಚಿಗಳ ಅಡಿಯಲ್ಲಿರುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 16, 2025 ರ ಸಂಜೆ 4:00 ಗಂಟೆಯವರೆಗೆ.
ಯಾವ ಹುದ್ದೆಗಳಿಗೆ ಪಿ.ಎಫ್. (PF) ಸೌಲಭ್ಯ ಲಭ್ಯವಿದೆ?
- ಮಾಸಿಕ ₹15,000/- ಅಥವಾ ಅದಕ್ಕಿಂತ ಕಡಿಮೆ ವೇತನ ಇರುವ ಹುದ್ದೆಗಳಿಗೆ ಮಾತ್ರ ಪಿ.ಎಫ್. ಸೌಲಭ್ಯ ನೀಡಲಾಗುವುದು. ಉದಾಹರಣೆಗೆ, ಮಲ್ಟಿ ರಿಹ್ಯಾಬಿಲಿಟೇಶನ್ ವರ್ಕರ್ ಹುದ್ದೆಗೆ.
ಹುದ್ದೆಗಳ ಸಂಖ್ಯೆ ಬದಲಾಗುತ್ತಾ?
- ಹೌದು, ಪ್ರಕಟಣೆಯಲ್ಲಿ ತಿಳಿಸಿರುವಂತೆ, ಹುದ್ದೆಗಳ ಸಂಖ್ಯೆ ಬದಲಾವಣೆಯಾಗುವ ಷರತ್ತಿಗೊಳಪಟ್ಟಿದೆ. ಜಿಲ್ಲಾ ಆರೋಗ್ಯ ಸಂಘ ಉಡುಪಿ ಇದರ ತೀರ್ಮಾನವೇ ಅಂತಿಮವಾಗಿರುತ್ತದೆ.
ಅರ್ಜಿ ಎಲ್ಲಿಗೆ ಸಲ್ಲಿಸಬೇಕು?
- ಜಿಲ್ಲಾ ಯೋಜನಾ ನಿರ್ವಹಣಾ ಘಟಕ, ಎನ್‌ಎಚ್‌ಎಮ್, ಜಿಲ್ಲಾ ಆರೋಗ್ಯ ಕಚೇರಿ, ಅಜ್ಜರಕಾಡು, ಉಡುಪಿ.
ಯಾವ ಹುದ್ದೆಗಳಿಗೆ MBBS ಅಗತ್ಯವಿದೆ?
- ವೈದ್ಯರು, ಫಿಸಿಶಿಯನ್, ಹೃದಯ ರೋಗ ತಜ್ಞರು, ನೇತ್ರ ತಜ್ಞರು ಮೊದಲಾದ ಹುದ್ದೆಗಳಿಗೆ.
ನರ್ಸಿಂಗ್ ಹುದ್ದೆಗಳಿಗೆ ಯಾವ ಅರ್ಹತೆ ಬೇಕು?
- ಬಿ.ಎಸ್ಸಿ ನರ್ಸಿಂಗ್ / ಜಿ.ಎನ್.ಎಂ ಅಥವಾ ಡಿಪ್ಲೋಮ ನರ್ಸಿಂಗ್ ಹಾಗೂ ಕರ್ನಾಟಕ ನರ್ಸಿಂಗ್ ಕೌನ್ಸಿಲ್‌ನಲ್ಲಿ ನೋಂದಣಿ.
ಅರ್ಜಿ ಶುಲ್ಕ ಇದೆಯೇ?
- ಇಲ್ಲ, ಯಾವುದೇ ಶುಲ್ಕವಿಲ್ಲ.
ಅಂತಿಮ ತೀರ್ಮಾನ
ಒಟ್ಟಿನಲ್ಲಿ, ಉಡುಪಿ ಜಿಲ್ಲಾ ಆರೋಗ್ಯ ಇಲಾಖೆ ನೇಮಕಾತಿ 2025 ರ ಈ ಕರೆ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಕರ್ನಾಟಕದ ಅಭ್ಯರ್ಥಿಗಳಿಗೆ ನಿಜವಾದ ವರದಾನ. ಸೂಕ್ತ ವಿದ್ಯಾರ್ಹತೆ ಮತ್ತು ಅನುಭವವಿದ್ದರೆ, ತಡಮಾಡದೇ udupi.nic.in ಗೆ ಭೇಟಿ ನೀಡಿ, ಅರ್ಜಿ ಪ್ರಕ್ರಿಯೆಯನ್ನು ಬೇಗನೇ ಮುಗಿಸಿ. ನೆನಪಿರಲಿ, ಕೊನೆಯ ದಿನಾಂಕ ಹತ್ತಿರ ಬರುವ ಮುನ್ನವೇ ಅರ್ಜಿ ಸಲ್ಲಿಸಿದರೆ ಯಾವುದೇ ಗೊಂದಲವಿರುವುದಿಲ್ಲ. ಉತ್ತಮ ವೇತನ ಮತ್ತು ಸೌಲಭ್ಯಗಳಿರುವ ಈ ಹುದ್ದೆಗಳು ನಿಮ್ಮ ಕಾಯರ್ಕಳವನ್ನು ಇನ್ನಷ್ಟು ಉಜ್ವಲಗೊಳಿಸುವುದರಲ್ಲಿ ಸಂದೇಹವಿಲ್ಲ! ಎಲ್ಲಾ ಅಭ್ಯರ್ಥಿಗಳಿಗೂ ಶುಭವಾಗಲಿ.