---Advertisement---

PNB ಬ್ಯಾಂಕ್ ನೇಮಕಾತಿ 2025: ಗ್ರಾಜುಯೇಟ್ ಅಭ್ಯರ್ಥಿಗಳಿಗೆ 750 ಬ್ಯಾಂಕ್ ಅಧಿಕಾರಿ ಹುದ್ದೆಗಳು

By Dinesh

Published On:

Last Date: 2025-11-23

PNB ಬ್ಯಾಂಕ್ ನೇಮಕಾತಿ 2025
---Advertisement---
Rate this post

ಪಂಜಾಬ್ ನ್ಯಾಷನಲ್ ಬ್ಯಾಂಕ್ ನೇಮಕಾತಿ 2025 ಆರಂಭವಾಗಿದೆ. ಗ್ರಾಜುಯೇಟ್ ಅಭ್ಯರ್ಥಿಗಳಿಗೆ 750 ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆಗಳು ಖಾಲಿ. ಅರ್ಜಿ ಸಲ್ಲಿಸಲು 23 ನವೆಂಬರ್ 2025 ಕೊನೆಯ ದಿನ. ಕರ್ನಾಟಕದಲ್ಲಿ 85 ಹುದ್ದೆಗಳು ಲಭ್ಯವಿವೆ.

PNB ಬ್ಯಾಂಕ್ ನೇಮಕಾತಿ 2025

ಬ್ಯಾಂಕ್ ಉದ್ಯೋಗದ ಕನಸು ಕಾಣುತ್ತಿರುವವರು ಗಮನಿಸಿ. ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಇತ್ತೀಚೆಗೆ ಬಹು ನಿರೀಕ್ಷಿತ PNB ಬ್ಯಾಂಕ್ ನೇಮಕಾತಿ 2025 ಪ್ರಕಟಿಸಿದೆ. ಈ ನೇಮಕಾತಿ ಮೂಲಕ ಭಾರತದೆಲ್ಲೆಡೆ 750 Local Bank Officer (LBO) ಹುದ್ದೆಗಳನ್ನು ಭರ್ತಿ ಮಾಡಲು ಬ್ಯಾಂಕ್ ಅರ್ಜಿ ಆಹ್ವಾನಿಸಿದೆ. ಪದವೀಧರರಿಗೆ ಇದು ಅತ್ಯಂತ ಉತ್ತಮ ಅವಕಾಶ.

ನೀವೂ “ನನಗೂ ಬ್ಯಾಂಕ್ ಕೆಲಸ ಬೇಕು” ಎಂದು ಯೋಚಿಸುತ್ತಿದ್ದೀರಾ? ಹಾಗಾದರೆ ಈ ಲೇಖನ ಸಂಪೂರ್ಣ ಓದಿ, ಏಕೆಂದರೆ ಇಲ್ಲಿ ನಾವು ಅರ್ಹತೆ, ವೇತನ, ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಸುವ ವಿಧಾನಗಳ ಬಗ್ಗೆ ಸುಲಭವಾಗಿ ವಿವರಿಸಿದ್ದೇವೆ.

ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಮುನ್ನ ಈ ಮಾಹಿತಿಯನ್ನು ಚೆನ್ನಾಗಿ ಓದಿ.

  • ವಿದ್ಯಾರ್ಹತೆ, ವಯಸ್ಸು, ವೇತನ: ಯಾವ ಯಾವ ಹುದ್ದೆಗೆ ಯಾವ ವಿದ್ಯಾರ್ಹತೆ ಬೇಕು, ಎಷ್ಟು ವಯಸ್ಸಿನವರು ಅರ್ಜಿ ಹಾಕಬಹುದು, ಎಷ್ಟು ಸಂಬಳ ಸಿಗುತ್ತದೆ ಎಂಬೆಲ್ಲಾ ಮಾಹಿತಿಯನ್ನು ಚೆನ್ನಾಗಿ ಓದಿ.
  • ಅಧಿಸೂಚನೆ ಓದಿ: ಕೆಳಗಡೆ ಕೊಟ್ಟಿರುವ ಲಿಂಕ್‌ನಲ್ಲಿ ಅಧಿಸೂಚನೆ ಸಂಪೂರ್ಣವಾಗಿ ಓದಿ. ಇದರಲ್ಲಿ ಎಲ್ಲಾ ಮಾಹಿತಿ ವಿವರವಾಗಿ ಇರುತ್ತದೆ.
  • ಕೊನೆಯ ದಿನಾಂಕ ಗಮನಿಸಿ: ಅರ್ಜಿ ಹಾಕಲು ಕೊನೆಯ ದಿನಾಂಕವನ್ನು ಮಿಸ್ ಮಾಡಿಕೊಳ್ಳಬೇಡಿ.
  • ಇತರ ಗ್ರೂಪ್‌ಗಳಿಗೆ ಜಾಯಿನ್ ಆಗಿ: ನಮ್ಮ ಟೆಲಿಗ್ರಾಮ್ ಮತ್ತು ಫೇಸ್‌ಬುಕ್ ಗ್ರೂಪ್‌ಗಳಿಗೆ ಜಾಯಿನ್ ಆಗಿ. ಪ್ರತಿದಿನ ಹೊಸ ಉದ್ಯೋಗ ಮಾಹಿತಿ ಸಿಗುತ್ತದೆ.
  • ಉಚಿತ ಸೇವೆ: ನಾವು ಒದಗಿಸುವ ಎಲ್ಲಾ ಮಾಹಿತಿ ಉಚಿತವಾಗಿರುತ್ತೆ. ನಮ್ಮ ಹೆಸರಿನಲ್ಲಿ ಯಾರಾದರೂ ಹಣ ಕೇಳಿದರೆ ತಕ್ಷಣ ನಮಗೆ ಮಾಹಿತಿ ನೀಡಿ.
  • ಹೆಚ್ಚಿನ ಉದ್ಯೋಗ ವಿವರಗಳಿಗಾಗಿ, ನಮ್ಮ Ka20jobs.com ವೆಬ್‌ಸೈಟ್‌ಗೆ ಭೇಟಿ ನೀಡಿ.
  • ನಮ್ಮ WhatsApp Groupಗೆ ಸೇರುವ ಮೂಲಕ ಪ್ರತಿದಿನ ತ್ವರಿತ ಉಚಿತ ಉದ್ಯೋಗ ಅಪ್ಡೇಟ್ಗಳನ್ನು ಪಡೆಯಿರಿ.
  • ನಮ್ಮ ಅಧಿಕೃತ WhatsApp Channelಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ.

ಉದ್ಯೋಗದ ಮೇಲ್ನೋಟ

ನೇಮಕಾತಿ ಸಂಸ್ಥೆಪಂಜಾಬ್ ನ್ಯಾಷನಲ್ ಬ್ಯಾಂಕ್ (PNB)
ಹುದ್ಧೆಯ ಹೆಸರುಸ್ಥಳೀಯ ಬ್ಯಾಂಕ್ ಅಧಿಕಾರಿ
ಒಟ್ಟು ಹುದ್ದೆ750
ಉದ್ಯೋಗ ಸ್ಥಳಭಾರತದಾದ್ಯಂತ
ಅಧಿಕೃತ ವೆಬ್‌ಸೈಟ್https://pnb.bank.in/
ಅರ್ಜಿ ಸಲ್ಲಿಸುವ ಬಗೆಆನ್ಲೈನ್
ವಾಟ್ಸಾಪ್ ಗ್ರೂಪ್ ಸೇರುವ ಲಿಂಕ್ಗೆ ಇಲ್ಲಿ ಕ್ಲಿಕ್ ಮಾಡಿಇಲ್ಲಿ ಕ್ಲಿಕ್ ಮಾಡಿ

ಹೆಚ್ಚಿನ ಉದ್ಯೋಗಗಳು: ಉಡುಪಿ ಕೋಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ನೇಮಕಾತಿ 2025 – 5 ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ರಾಜ್ಯವಾರು ಹುದ್ದೆಗಳ ವಿವರ

ಕನ್ನಡಿಗರಿಗೆ ಖುಷಿ ಸುದ್ದಿ. ಕರ್ನಾಟಕದಲ್ಲಿ 85 ಹುದ್ದೆಗಳು ಲಭ್ಯವಿವೆ. ಇನ್ನು ಕೆಲವು ಪ್ರಮುಖ ರಾಜ್ಯಗಳ ಹುದ್ದೆಗಳ ಸಂಖ್ಯೆ:

ರಾಜ್ಯದ ಹೆಸರುಹುದ್ದೆಗಳ ಸಂಖ್ಯೆ
ಆಂಧ್ರ ಪ್ರದೇಶ5
ಗುಜರಾತ್95
ಕರ್ನಾಟಕ85
ಮಹಾರಾಷ್ಟ್ರ135
ತೆಲಂಗಾಣ88
ತಮಿಳುನಾಡು85
ಪಶ್ಚಿಮ ಬಂಗಾಳ90
ಜಮ್ಮು ಮತ್ತು ಕಾಶ್ಮೀರ್20
ಲಡಾಖ್3
ಅರುಣಾಚಲ ಪ್ರದೇಶ5
ಅಸ್ಸಾಂ86
ಮಣಿಪುರ8
ಮೇಘಾಲಯ8
ಮಿಜೋರಂ5
ನಾಗಾಲ್ಯಾಂಡ್5
ಸಿಕ್ಕಿಂ5
ತ್ರಿಪುರಾ22

ಶೈಕ್ಷಣಿಕ ಅರ್ಹತೆ

PNB LBO ಹುದ್ದೆಗೆ ಅರ್ಜಿ ಸಲ್ಲಿಸಲು ಕೆಲವು ಕಟ್ಟುನಿಟ್ಟಾದ ನಿಯಮಗಳಿವೆ. ಅವುಗಳನ್ನ ಇಲ್ಲಿ ಸಂಕ್ಷಿಪ್ತವಾಗಿ ತಿಳಿಸಲಾಗಿದೆ.

1. ಕಡ್ಡಾಯ ವಿದ್ಯಾರ್ಹತೆ

  • ವಿದ್ಯಾರ್ಹತೆ: ನೀವು ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವೀಧರರಾಗಿರಬೇಕು (Graduate). ಅಂದರೆ, ನಿಮ್ಮ ಪದವಿ ಅಂಕಪಟ್ಟಿ/ಪ್ರಮಾಣಪತ್ರ ಆನ್‌ಲೈನ್‌ನಲ್ಲಿ ನೋಂದಾಯಿಸುವ ದಿನಾಂಕದಂದು ನಿಮ್ಮ ಕೈಯಲ್ಲಿ ಇರಲೇಬೇಕು!

2. ಕೆಲಸದ ಅನುಭವ (Experience): ಇದನ್ನ ಮರೆಯಲೇಬೇಡಿ

ಅಪ್ಪಿ ತಪ್ಪಿಯೂ ಇದನ್ನ ಮರೆಯಬೇಡಿ. ಈ ಹುದ್ದೆಗಳಿಗೆ ಅರ್ಜಿ ಹಾಕಲು ನಿಮಗೆ ಕನಿಷ್ಠ ಒಂದು ವರ್ಷದಷ್ಟು ಅನುಭವ ಇರಲೇಬೇಕು.

ಪ್ರಮುಖ ಸೂಚನೆ: ಈ ಅನುಭವ ಕೇವಲ ಯಾವುದೋ ಕಚೇರಿಯಲ್ಲಿ ಆದ್ರೆ ಸಾಲದು. ಅದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಕಾಯ್ದೆಯ ಎರಡನೇ ಶೆಡ್ಯೂಲ್‌ನಲ್ಲಿ ಪಟ್ಟಿ ಮಾಡಲಾದ ಯಾವುದೇ ನಿಗದಿತ ವಾಣಿಜ್ಯ ಬ್ಯಾಂಕ್ ಅಥವಾ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ (RRB) ನ ಕ್ಲೆರಿಕಲ್ ಅಥವಾ ಆಫೀಸರ್ ಕೇಡರ್‌ನಲ್ಲಿರಬೇಕು.

3. ಸ್ಥಳೀಯ ಭಾಷಾ ಜ್ಞಾನ

ನೀವು ಯಾವ ರಾಜ್ಯಕ್ಕೆ ಅರ್ಜಿ ಸಲ್ಲಿಸುತ್ತೀರೋ, ಅಲ್ಲಿನ ಸ್ಥಳೀಯ ಭಾಷೆಯಲ್ಲಿ ಪ್ರಾವೀಣ್ಯತೆ (ಓದಲು, ಬರೆಯಲು ಮತ್ತು ಮಾತನಾಡಲು) ಹೊಂದಿರಬೇಕು. ಕರ್ನಾಟಕಕ್ಕೆ ಅರ್ಜಿ ಹಾಕುವವರಿಗೆ, ಕನ್ನಡ ಭಾಷೆ ಪಕ್ಕಾ ಗೊತ್ತಿರಬೇಕು. ಬೇರೆ ರಾಜ್ಯಕ್ಕೆ ಅಪ್ಲೈ ಮಾಡ್ತೀರಾ? ಅಲ್ಲಿನ ಭಾಷೆ ಕಲಿತಿರಬೇಕು.

ವಯಸ್ಸಿನ ಮಿತಿ

  • ಕನಿಷ್ಠ ವಯಸ್ಸು: 20 ವರ್ಷ
  • ಗರಿಷ್ಠ ವಯಸ್ಸು: 30 ವರ್ಷ
  • ಸರ್ಕಾರದ ನಿಯಮಾನುಸಾರ ಮೀಸಲಾತಿ ವರ್ಗಗಳಿಗೆ ವಯೋಮಿತಿ ರಿಯಾಯಿತಿ ದೊರೆಯುತ್ತದೆ.

ವಯೋಮಿತಿ ಸಡಿಲಿಕೆ:

ಒಬಿಸಿ (ಎನ್‌ಸಿಎಲ್) ಅಭ್ಯರ್ಥಿಗಳು: 03 ವರ್ಷಗಳು
ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು: 05 ವರ್ಷಗಳು
ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳು: 10 ವರ್ಷಗಳು

ವೇತನ

  • ₹48,480 ರಿಂದ ₹85,920 ವರೆಗೆ

ಅರ್ಜಿ ಶುಲ್ಕ

  • SC/ST/PwBD ಅಭ್ಯರ್ಥಿಗಳಿಗೆ: ₹59/- (GST ಸೇರಿ)
  • ಇತರೆ ಅಭ್ಯರ್ಥಿಗಳಿಗೆ: ₹1180/- (GST ಸೇರಿ)

ಅರ್ಜಿಯನ್ನು ಆನ್‌ಲೈನ್ ಪಾವತಿ ಮೂಲಕ ಮಾತ್ರ ಸಲ್ಲಿಸಬಹುದು.

ಆಯ್ಕೆ ಪ್ರಕ್ರಿಯೆ

ಆಯ್ಕೆ ಪ್ರಕ್ರಿಯೆ ಒಟ್ಟು ನಾಲ್ಕು ಹಂತಗಳಲ್ಲಿ ನಡೆಯುತ್ತೆ. ಆದರೆ ಬ್ಯಾಂಕ್ ಅಗತ್ಯಕ್ಕೆ ಅನುಗುಣವಾಗಿ ಕೆಲ ಹಂತಗಳನ್ನ ಬದಲಾಯಿಸಬಹುದು.

  1. ಆನ್‌ಲೈನ್ ಲಿಖಿತ ಪರೀಕ್ಷೆ (Online Written Test): ಇದರಲ್ಲಿ 5 ವಿಭಾಗಗಳಿರುತ್ತವೆ – ರೀಸನಿಂಗ್ ಮತ್ತು ಕಂಪ್ಯೂಟರ್ ಆಪ್ಟಿಟ್ಯೂಡ್, ಡೇಟಾ ಅನಾಲಿಸಿಸ್ & ಇಂಟರ್‌ಪ್ರಿಟೇಷನ್, ಇಂಗ್ಲಿಷ್ ಭಾಷೆ, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್, ಮತ್ತು ಜನರಲ್/ಎಕಾನಮಿ/ಬ್ಯಾಂಕಿಂಗ್ ಜಾಗೃತಿ. ಒಟ್ಟು 150 ಪ್ರಶ್ನೆಗಳಿಗೆ 150 ಅಂಕಗಳು.
  2. ಸ್ಕ್ರೀನಿಂಗ್ (Screening)
  3. ಭಾಷಾ ಪ್ರಾವೀಣ್ಯತೆ ಪರೀಕ್ಷೆ (Language Proficiency Test)
  4. ವೈಯಕ್ತಿಕ ಸಂದರ್ಶನ (Personal Interview)
ಕರ್ನಾಟಕದಲ್ಲಿ ಪರೀಕ್ಷಾ ಕೇಂದ್ರಗಳು

ಕರ್ನಾಟಕದ ಅಭ್ಯರ್ಥಿಗಳಿಗೆ ಈ ನಗರಗಳಲ್ಲಿ ಪರೀಕ್ಷಾ ಅವಕಾಶ ದೊರೆಯುತ್ತದೆ:

  • ಬೆಂಗಳೂರು
  • ಹುಬ್ಬಳ್ಳಿ-ಧಾರವಾಡ
  • ಮೈಸೂರು
  • ಶಿವಮೊಗ್ಗ

ಪ್ರಮುಖ ದಿನಾಂಕಗಳು

ಈವೆಂಟ್‌ದಿನಾಂಕ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ03.11.2025
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ23.11.2025
ಆನ್‌ಲೈನ್ ಪರೀಕ್ಷೆಯ ಸಂಭಾವ್ಯ ದಿನಾಂಕಡಿಸೆಂಬರ್ 2025 / ಜನವರಿ 2026. (ಇದು ನಿಖರ ದಿನಾಂಕವಲ್ಲ, ಬದಲಾಗಬಹುದು.)

ಪ್ರಮುಖ ಲಿಂಕ್‌ಗಳು

ಅಧಿಕೃತ ವೆಬ್‌ಸೈಟ್ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ ಲಿಂಕ್ಇಲ್ಲಿ ಡೌನ್‌ಲೋಡ್ ಮಾಡಿ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಅಧಿಸೂಚನೆ ಪುಟದ ಲಿಂಕ್ಇಲ್ಲಿ ವೀಕ್ಷಿಸಿ
ವಾಟ್ಸಾಪ್ ಗ್ರೂಪ್ ಸೇರುವ ಲಿಂಕ್ ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸುವ ಪ್ರಕ್ರಿಯೆ

  1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ – https://pnb.bank.in
  2. “Recruitment/Career” ವಿಭಾಗದಲ್ಲಿ “Local Bank Officer Recruitment 2025” ಲಿಂಕ್ ಕ್ಲಿಕ್ ಮಾಡಿ.
  3. “Click Here for New Registration” ಆಯ್ಕೆ ಮಾಡಿ ಹೊಸ ನೋಂದಣಿ ಮಾಡಿಕೊಳ್ಳಿ.
  4. ನಿಮ್ಮ ವಿವರಗಳನ್ನು ತುಂಬಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  5. ಅರ್ಜಿ ಶುಲ್ಕವನ್ನು ಪಾವತಿಸಿ ಮತ್ತು ಅಂತಿಮವಾಗಿ Submit ಬಟನ್ ಒತ್ತಿ.
  6. ಭವಿಷ್ಯದ ಬಳಕೆಗೆ ಅರ್ಜಿ ಪ್ರತಿಯನ್ನು ಸೇವ್ ಮಾಡಿಕೊಂಡು ಇಡಿ.

ಹೆಚ್ಚಿನ ಉದ್ಯೋಗಗಳು: ಕೈಪುಂಜಾಲು ಮೀನುಗಾರರ ಸಹಕಾರ ಸಂಘ ನೇಮಕಾತಿ 2025: PUC ಉತ್ತೀರ್ಣ ಅಭ್ಯರ್ಥಿಗಳಿಗೆ ಕಿರಿಯ ಗುಮಾಸ್ತ ಹುದ್ದೆಗಳು

FAQS: ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳು

PNB ಬ್ಯಾಂಕ್ ನೇಮಕಾತಿ 2025: ಗ್ರಾಜುಯೇಟ್ ಅಭ್ಯರ್ಥಿಗಳಿಗೆ 750 ಬ್ಯಾಂಕ್ ಅಧಿಕಾರಿ ಹುದ್ದೆಗಳು ಅಂದರೆ ಏನು?

  • ಇದು ಪಂಜಾಬ್ ನ್ಯಾಷನಲ್ ಬ್ಯಾಂಕ್‌ ತನ್ನ ವಿವಿಧ ಶಾಖೆಗಳಿಗೆ Local Bank Officer (LBO) ಹುದ್ದೆಗಳ ಭರ್ತಿಗಾಗಿ ಹೊರಡಿಸಿದ ಅಧಿಸೂಚನೆ.

ಅರ್ಜಿ ಸಲ್ಲಿಸುವ ದಿನಾಂಕಗಳನ್ನು ಇನ್ನೊಮ್ಮೆ ಹೇಳಬಹುದೇ?

  • ಆನ್‌ಲೈನ್ ಅರ್ಜಿ ಪ್ರಕ್ರಿಯೆಯು 03.11.2025 ರಂದು ಪ್ರಾರಂಭವಾಗಿ 23.11.2025 ರಂದು ಮುಕ್ತಾಯಗೊಳ್ಳುತ್ತೆ.

ನಾನು ಬೇರೆ ರಾಜ್ಯದಲ್ಲಿ ಕೆಲಸ ಮಾಡಿದ್ದೇನೆ, ಕರ್ನಾಟಕಕ್ಕೆ ಅರ್ಜಿ ಹಾಕಬಹುದೇ?

  • ಖಂಡಿತಾ ಹಾಕಬಹುದು. ಆದರೆ, ನೀವು ಕರ್ನಾಟಕಕ್ಕೆ ಅರ್ಜಿ ಸಲ್ಲಿಸಿದರೆ, ನಿಮಗೆ ಕನ್ನಡ ಭಾಷೆ ಓದಲು, ಬರೆಯಲು ಮತ್ತು ಮಾತನಾಡಲು ಬರುವುದು ಕಡ್ಡಾಯ.

ಈ ಹುದ್ದೆಗೆ ಕನಿಷ್ಠ ಮತ್ತು ಗರಿಷ್ಠ ವೇತನ ಎಷ್ಟು?

  • ಸ್ಕೇಲ್ ಆಫ್ ಪೇ ಪ್ರಕಾರ, ₹48,480/- ಕನಿಷ್ಠ ಮತ್ತು ₹85,920/- ಗರಿಷ್ಠ ವೇತನವಿದೆ. ಜೊತೆಗೆ ಇತರೆ ಭತ್ಯೆಗಳು ಇರುತ್ತವೆ.

ನಾನು ಇತ್ತೀಚೆಗೆ ಪದವಿ ಪಡೆದಿದ್ದೇನೆ. ಅರ್ಜಿ ಹಾಕಬಹುದಾ?

  • ಹೌದು, ಆದರೆ ನೀವು ಪದವಿ ಪ್ರಮಾಣಪತ್ರ ಹೊಂದಿರಬೇಕು ಮತ್ತು ಅರ್ಜಿ ಸಲ್ಲಿಸುವ ದಿನದಂದು ಅದು ಮಾನ್ಯವಾಗಿರಬೇಕು.

ನಾನು Officer Cadre ನಲ್ಲಿ 2 ವರ್ಷ ಕೆಲಸ ಮಾಡಿದ್ದೇನೆ. ಇದರಿಂದ ಏನು ಲಾಭ?

  • ನಿಮಗೆ 2 ಇಂಕ್ರಿಮೆಂಟ್‌ಗಳು ಸಿಗಬಹುದು, provided your job profile matches PNB Scale-I Officer.

ನಾನು ಕರ್ನಾಟಕದವನು ಆದರೆ ತೆಲಂಗಾಣದ ಹುದ್ದೆಗೆ ಅರ್ಜಿ ಹಾಕಬಹುದಾ?

  • ಇಲ್ಲ. ನೀವು ಅರ್ಜಿ ಹಾಕುವ ರಾಜ್ಯದ ಸ್ಥಳೀಯ ಭಾಷೆಯಲ್ಲಿ ಪ್ರಾವೀಣ್ಯತೆ ಇರಬೇಕು.

ಅರ್ಜಿ ಸಲ್ಲಿಸಲು ಇತರ ಮಾರ್ಗಗಳಿವೆಯಾ?

  • ಇಲ್ಲ. ನೀವು https://pnb.bank.in/ ನಲ್ಲಿ ಮಾತ್ರ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಅಂತಿಮ ತೀರ್ಮಾನ

ಸರ್ಕಾರಿ ಬ್ಯಾಂಕ್‌ನಲ್ಲಿ ಕೆಲಸ ಮಾಡಬೇಕೆಂಬ ಆಸೆ ಇರುವವರಿಗೆ PNB ಬ್ಯಾಂಕ್ ನೇಮಕಾತಿ 2025 ಒಂದು ಸುವರ್ಣಾವಕಾಶ. ಸ್ಥಿರ ವೇತನ, ವೃತ್ತಿಜೀವನದ ಪ್ರಗತಿ ಮತ್ತು ಗೌರವದ ಸ್ಥಾನ, ಆದ್ದರಿಂದ ಸಮಯ ವ್ಯರ್ಥ ಮಾಡದೆ, ನವೆಂಬರ್ 23ರೊಳಗೆ ನಿಮ್ಮ ಅರ್ಜಿಯನ್ನು ಸಲ್ಲಿಸಿ. ಯಾರು ಗೊತ್ತಾ? ನಿಮ್ಮ ಮುಂದಿನ ಪಾಸ್‌ಬುಕ್‌ನಲ್ಲಿ “Punjab National Bank Officer” ಎಂದು ಬರೆದು ಬರಬಹುದು. ಶುಭವಾಗಲಿ.

Dinesh

ನಮಸ್ಕಾರ, ನಾನು ನಿಮ್ಮ ದಿನೇಶ್. ನನ್ನ ಮುಖ್ಯ ಗಮನ ನಮ್ಮ ಕರಾವಳಿ ಭಾಗದ, ಅಂದರೆ ಉಡುಪಿ, ಮಂಗಳೂರು, ಮತ್ತು ಕುಂದಾಪುರ ಸುತ್ತಮುತ್ತಲಿನ ಉದ್ಯೋಗಾವಕಾಶಗಳ ಮೇಲೆ. ಜೊತೆಗೆ, ಇಡೀ ಕರ್ನಾಟಕದಾದ್ಯಂತ ಲಭ್ಯವಿರುವ ಪ್ರಮುಖ ಸರ್ಕಾರಿ ಮತ್ತು ಖಾಸಗಿ ಹುದ್ದೆಗಳ ಮಾಹಿತಿಯನ್ನೂ ನಿಮಗೆ ತಲುಪಿಸುತ್ತೇನೆ. ಯಾವ ಇಲಾಖೆಯಲ್ಲಿ ಹುದ್ದೆ ಖಾಲಿ ಇದೆ, ಅದಕ್ಕೆ ಬೇಕಾದ ಅರ್ಹತೆಗಳೇನು, ಅರ್ಜಿ ಸಲ್ಲಿಸುವುದು ಹೇಗೆ, ಮತ್ತು ಕೊನೆಯ ದಿನಾಂಕದಂತಹ ಪ್ರತಿಯೊಂದು ವಿವರವನ್ನು ನೀವು ಇಲ್ಲಿ ಪಡೆಯಬಹುದು.

---Advertisement---

Related Post

Leave a Comment

WhatsApp Icon Join ka20jobs.com Chanel